History, Vision and Mission
ಬಂಟ್ವಾಳ ತಾಲೂಕು ಕೇಂದ್ರದಿಂದ ಪಾಣೆಮಂಗಳೂರು ಮೂಲಕ ಮೆಲ್ಕಾರ್ -ಮುಡಿಪು ರಸ್ತೆಯಲ್ಲಿ 24 ಕಿ.ಮೀ ದೂರ ಕ್ರಮಿಸಿದಾಗ ಸಿಗುವ ಊರು ಬಾಳೆಪುಣಿ .ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಗಳಲ್ಲಿ 3550.81 ಹೆಕ್ಟರ್ ಭೌಗೋಳಿಕ ವಿಸ್ತಿರ್ಣ ಹೊಂದಿರುವ 2ಗ್ರಾಮ(ಬಾಳೆಪುಣಿ ಮತ್ತು ಕೈರಂಗಳ)ಗಳನ್ನು ಒಳಗೊಂಡ ಗ್ರಾಮ ಪಂಚಾಯತ್ .ಪ್ರಧಾನವಾಗಿ ಕೃಷಿಭೂಮಿಯನ್ನೊಳಗೊಂಡ ಪ್ರದೇಶವಾಗಿದೆ ಸರ್ವಧರ್ಮ ಸಮನ್ವತೆಯನ್ನು ಸಾರುವ ಪ್ರತೀಕವಾಗಿ ಕಾರಣೀಕ ಕ್ಷೇತ್ರವಾದ ಕಣಂತೂರು ಶ್ರೀತೋಡಕುಕ್ಕಿನಾರ್ ದೈವಸ್ಥಾನ,ಸೈಂಟ್ ಜೋಸೆಫ್ ವಾಜ್ ಚರ್ಚ್ ಮುಡಿಪು,ಗೌಸೀಯಾ ಜುಮ್ಮಾ ಮಸೀದಿ ಕೈರಂಗಳ ಪ್ರವಾಸಿಗರನ್ನು ಆಕರ್ಷಿಸುವ ಧಾರ್ಮಿಕ ಕೇಂದ್ರಗಳಾಗಿವೆ
ಸಂಪೂರ್ಣ ಸ್ವಚ್ಚತಾ ಅಂದೋಲನದಡಿ “ರಾಷ್ಟ್ರ ಮಟ್ಟದ ನಿರ್ಮಲ ಗ್ರಾಮ ಪುರಸ್ಕಾರ” ಪಡೆದಿದ್ದು ಗ್ರಾಮದ 2,022 ಕುಟುಂಬಗಳು ಶೌಚಾಲಯಗಳನ್ನು ಹೊಂದಿರತ್ತದೆ 3 ಹಿರಿಯ ಪ್ರಾಥಮಿಕ ಶಾಲೆ ,2ಕಿರಿಯ ಪ್ರಾಥಮಿಕ ಶಾಲೆ ,ಪ್ರೌಢಶಾಲೆ, ಜವಾಹರ ನವೋದಯ ವಿದ್ಯಾಲಯ ,P.A ಇಂಜಿನಿಯರ್ ಕಾಲೇಜು ನಡುಪದವು ಮುಂತಾದ ಶೈಕ್ಷಣಿಕ ಕೇಂದ್ರಗಳನ್ನೊಳಗೊಂಡಿದೆ ,ಮಾಹಿತಿ ತಂತ್ರಜ್ಞಾನದ ಪ್ರಸಿದ್ದ ಕಂಪೆನಿಯಾದ INFOSYS Technologies ಪಂಚಾಯತ್ ವ್ಯಾಪ್ತಿಯ ಕೈರಂಗಳ ಗ್ರಾಮದಲ್ಲಿದೆ
ಕೃಷಿ, ಕೃಷಿ ಕೂಲಿ ಹಾಗೂ ಕೃಷಿಯೇತರ ಕೂಲಿ ಇಲ್ಲಿನ ಜನರ ಮುಖ್ಯ ಉದ್ಯೋಗವಾಗಿದೆ. ಮಹಿಳೆಯರು ಬೀಡಿ ಉದ್ಯಮವನ್ನೇ ಆಶ್ರಯಿಸಿದ್ದಾರೆದಕ್ಷಿಣ ಕನ್ನಡ ಜಿಲ್ಲೆ ,ಬಂಟ್ವಾಳ ತಾಲೂಕಿನಲ್ಲಿರುವ ನರಿಂಗಾಣ ಗ್ರಾಮ ಪಂಚಾಯತ್ ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ 16 ಕಿ.ಮೀ ದೂರದಲ್ಲಿದೆ. ಉತ್ತರಕ್ಕೆ ಕೋಣಾಜೆ, ದಕ್ಷಿಣಕ್ಕೆ ಕೇರಳ, ಪಶ್ಚಿಮಕ್ಕೆ ಮಂಜನಾಡಿ ಹಾಗೂ ಪೂರ್ವಕ್ಕೆ ಕೈರಂಗಳ ಗ್ರಾಮಗಳಿಂದ ಸುತ್ತುವರಿದಿರುವ ಈ ಪಂಚಾಯತ್ ಪ್ರದೇಶವು ನರಿಂಗಾಣ ಎಂಬ ಏಕೈಕ ಗ್ರಾಮವನ್ನು ಒಳಗೊಂಡಿದೆ.ನರಿಂಗಾನ ಗ್ರಾಮ ಪಂಚಾಯತ್ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿದೆ.ಈ ಗ್ರಾಮವು ಕಲ್ಲಾರಕೋಡಿ, ನೆತ್ತಿಲಪದವು, ಮೋರ್ಲ, ಪೊಟ್ಟೋಳಿಕೆ, ಮೊಂಟೆಪದವು, ವಿದ್ಯಾನಗರ, ಕಲ್ಮಂಜ, ಕೊಡೆಂಚಿಲ್, ಜಲ್ಲಿ, ಮರಿಕಳ, ನೆತ್ತಿಲ, ಮುರತ್ತಗುಂಡಿ,ಆಳ್ವರಬೆಟ್ಟು,ಮಜಲು,ರಕ್ತೇಶ್ವರಿಕಟ್ಟೆ,
ತೌಡುಗೋಳಿ,ಬೋಳ,ಮುಂಗುಡೇಲ್,ಮೋಂಟುಗೋಳಿ ಮುಂತಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟು 200.18 ಎಕರೆಯಲ್ಲಿ ಹರಡಿಕೊಂಡಿರುವ ಈ ಗ್ರಾಮ ಫಲವತ್ತಾದ ಭೂಮಿಯನ್ನು ಹೊಂದಿ ಕೃಷಿ ಯೋಗ್ಯವಾಗಿದ್ದು, ಅಡಿಕೆ ಇಲ್ಲಿನ ಮುಖ್ಯ ಬೆಳೆಯಾಗಿದೆ.
2001ರ ಜನಗಣತಿಯ ಪ್ರಕಾರ 5630ಜನಸಂಖ್ಯೆಯುಳ್ಳ ಈ ಗ್ರಾಮದಲ್ಲಿ ಒಟ್ಟು
1200ಮನೆಗಳಿದ್ದು, ಹೆಚ್ಚಿನ ಜನರು ಕೂಲಿ ಕಾರ್ಮಿಕರಾಗಿದ್ದಾರೆ. ಗ್ರಾಮದಲ್ಲಿ ಮುಸ್ಲಿಂ,
ಹಿಂದು, ಕ್ರಿಶ್ಚಿಯನ್, ಪ.ಜಾತಿ ಹಾಗೂ ಪ.ಪಂಗಡದ ಕುಟುಂಬಗಳು ವಾಸವಾಗಿದ್ದು,
ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಸಂತಲಾರೆನ್ಸ್ ಚರ್ಚ್ ಬೋಳ,
ಮಿತ್ತಮೊಗರಾಯ ದೈವಸ್ಥಾನ ಶಾಂತಿಪಳಿಕೆ, ಮಲರಾಯಿ ದೈವಸ್ಥಾನ ಭಂಡಾರ ಮನೆ,ಮರಿಕಳ ಜುಮ್ಮಾ ಮಸೀದಿ, ದುರ್ಗಾಪರಮೇಶ್ವರಿ ಮಠ ,ರಿಫಾಯಿ ಮಸೀದಿ ಕೋಡಿ,ಬದ್ರೀಯ ಜುಮ್ಮಾ ಮಸೀದಿ ತೌಡುಗೋಳಿ,ಇವು ಗ್ರಾಮದ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.